ಬೆಳಕು (Light)
• ಬೆಳಕು ಒಂದು ರೀತಿಯ ವಿದ್ಯುದಯಸ್ಕಾಂತೀಯ ವಿಕಿರಣ. ತಾಂತ್ರಿಕವಾಗಿ, ಯಾವುದೇ ಪುನರಾವರ್ತನೆಯನ್ನು ಹೊಂದಿರುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಬೆಳಕು ಎನ್ನಬಹುದು.
• ಬೆಳಕು ಮೂಲಭೂತವಾಗಿ ಫೋಟಾನ್ ಎಂಬ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ.
• ಇದು ಸಾಮಾನ್ಯವಾಗಿ 400-700 ಎಂಎಂ ತರಗಾಂತರ ಹೊಂದಿರುತ್ತದೆ.
• ಇದೊಂದು ಶಕ್ತಿಯ ರೂಪವಾಗಿದೆ.
• ಭೂಮಿಗೆ ನೈಸರ್ಗಿಕ ಬೆಳಕಿನ ಮೂಲ ಸೂರ್ಯ
• ಸೂರ್ಯನ ಬೆಳಕು ಭೂಮಿಯನ್ನು ತಲುಪಲು 8-9 ಸೆಕೆಂಡ ಬೇಕು.
• ಯಾವುದೇ ಮಾದ್ಯಮವಿಲ್ಲದೆ ಸರಳ ರೇಖೆಯಲ್ಲಿ ಚಲಿಸುತ್ತದೆ.
• ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು.
ಬೆಳಕಿನ ಮಾನಗಳು
1) ದ್ಯುತಿ ತೀವ್ರತೆ(Candela) – ಕ್ಯಾಂಡೇಲಾ
2) ಪ್ರಕಾಶತೆ (Lumination) - ಲಕ್ಸ್
3) ದ್ಯುತಿಜಾಲ (Luminor Flux) - ಲ್ಯುಮೆನ್
ಬೆಳಕಿನ ಶಾಸ್ತ್ರ (Optics)

1) ಬೆಳಕಿನ ವಕ್ರೀಬವನ (Diffraction)
• ಒಂದು ಮಾದ್ಯಮದಿಂದ ಇನ್ನೊಂದು ಮಾದ್ಯಮಕ್ಕೆ ಬೆಳಕು ಚಲಿಸುವಾಗ ತನ್ನ ಪ್ರಸರಣ ದಿಕ್ಕನ್ನು ಬದಲಾಯಿಸುತ್ತದೆ. ಇದಕ್ಕೆ ವಕ್ರೀಬವನ ಎನ್ನಲಾಗುವುದು.
• ಹೆಚ್ಚು ಸಾಂದ್ರತೆಯ ಮಾಧ್ಯಮದಿಂದ ಕಡಿಮೆ ಸಾಂದ್ರತೆ ಮಾಧ್ಯಮದ ವಸ್ತು ನೋಡಿದಾಗ ದೂರ ಕಾಣುತ್ತದೆ.
• ಕಡಿಮೆ ಸಾಂದ್ರತೆ ಮಾದ್ಯಮದಿಂದ ಹೆಚ್ಚು ಸಾಂದ್ರತೆ ಮಾದ್ಯಮದ ವಸ್ತು ನೋಡಿದಾಗ ಸಮೀಪ ಕಾಣುತ್ತದೆ.
ವಕ್ರೀಭವನದ ಪರಿಣಾಮಗಳು
1) ಒಂದು ಬೀಕರಿನಲ್ಲಿಟ್ಟ ಕೋಲು ಮುರಿದಂತೆ ಕಾಣುವುದು.
2) ನೀರಿನಲ್ಲಿ ನಾಣ್ಯ ಮೇಲೆ ಇದ್ದಂತೆ ಕಾಣುವುದು.
2) ಬೆಳಕಿನ ಪ್ರತಿಪಲನ (Reflection)
• ಒಂದು ಮಾದ್ಯಮದಿಂದ ಮತ್ತೊಂದು ಮಾದ್ಯಮಕ್ಕೆ ಬೆಳಕು ಚಲಿಸಿ ಮತ್ತೇ ಅದೇ ಮಾದ್ಯಮಕ್ಕೆ ಹಿಂದುರುಗಿದರೇ ಅದನ್ನು ಪ್ರತಿಪಲನ ಎನ್ನುವರು.
• ಬೆಳಕು ಯಾವ ಕೋನದಲ್ಲಿ ಬೀಳುತ್ತದೆಯೋ ಅದೇ ಕೋನದಲ್ಲಿ ಪ್ರತಿಪಲಿಸುತ್ತದೆ.
3) ಬೆಳಕಿನ ಹೀರುವಿಕೆ (Absorption)
• ಒಂದು ವಸ್ತುವಿನ ಮೇಲೆ ಬೆಳಕು ಬಿದ್ದಾಗ ಯಾವ ಬಣ್ಣ ಹೀರಿಕೊಳ್ಳುವುದಿಲ್ಲವೋ ಅದು ಬಣ್ಣವಾಗಿ ಗೋಚರಿಸುತ್ತದೆ.
• ಉದಾ: ನೀಲಿ ಬಣ್ಣದ ವಸ್ತು ನೀಲಿ ಹೊರತುಪಡಿಸಿ ಉಳಿದೆಲ್ಲ ಬಣ್ಣಗಳನ್ನು ಹೀರಿಕೊಳ್ಳುತ್ತದೆ.
ಸಂಪೂರ್ಣ ಆಂತರಿಕ ಪ್ರತಿಪಲನ (Total Internal Reflection)
• ಪತನಕೋನ ಒಂದು ನಿರ್ದಿಷ್ಟ ಮಿತಿ ತಲುಪಿದಾಗ ವಕ್ರೀಮಕಿರಣ ವಕ್ರೀಭವನ ಆಗುವುದಿಲ್ಲ. ಬದಲಿಗೆ ಸಂಪೂರ್ಣವಾಗಿ ಮೊದಲಿನ ಮಾದ್ಯಮದಲ್ಲಿ ಪ್ರತಿಫಲಿಸುತ್ತದೆ. ಇದನ್ನು ಸಂಪೂರ್ಣ ಆಂತರಿಕ ಪ್ರತಿಪಲನ ಅನ್ನುವರು.
• ಆಪ್ಟಿಕಲ್ ಪೈಬ್ರ್, ವಜ್ರದ ಹೊಳಪು, ದೂರದರ್ಶಕಗಳಲ್ಲಿ ಈ ತತ್ವ ಅನುಸರಿಸಲಾಗುತ್ತದೆ.
• ಉದಾ: ಮರಿಚಿಕೆ (Mirage)
ಬೆಳಕಿನ ವರ್ಣ ವಿಭಜನೆ
• ಬಿಳಿಯ ಬಣ್ಣದಲ್ಲಿ 7 ಬಣ್ಣಗಳಿವೆ ಎಮದು ನ್ಯೂಟನ್ ಪತ್ತೆ ಹಚ್ಚಿದನು.
• ವರ್ಣ ವಿಭಜನಗೊಂಡಾಗ ಅಂದರೆ ಬಿಳಿ ಬಣ್ಣವನ್ನು ಸ್ಪಟಿಕದ ಮೂಲಕ ಹಾಯಿಸಿದಾಗ ನೆರಳೆ(Violet), ಬೂದು(Indigo), ನೀಲಿ(Blue), ಹಸಿರು(Green), ಹಳದಿ(Yellow), ಕಿತ್ತಳೆ(Orange), ಹಾಗೂ ಕೆಂಪು(Red) ಎಂಬ 7 ವರ್ಣಗಳಲ್ಲಿ ವಿಭಜನೆಗೊಳ್ಳುತ್ತದೆ.
• ((VIBGYOR) ಇದರಲ್ಲಿ ನೇರಳೆ ಅತೀ ಕಡಿಮೆ ಮತ್ತು ಕೆಂಪು ಬಣ್ಣ ಹೆಚ್ಚು ತರಂಗ ಅಂತರ ಹೊಂದಿದೆ.
• ಬೆಳಕಿನ ಚದುರುವಿಕೆಯಿಂದ ಕಾಮನಬಿಲ್ಲು ಕಾಣುವುದು ಮಳೆಯ ನೀರಿನ ಮೇಲೆ ಬೆಳಕು ಬಿದಾಗ ಅದು ವಿಭಜನೆ ಆಗುತ್ತದೆ.
• ಪ್ರಾಥಮಿಕ ಬಣ್ಣಗಳು ನೀಲಿ, ಹಸಿರು, ಕೆಂಪು
ದರ್ಪಣಗಳು
ನುಣುಪಾದ ಮೆರಗುಗೊಳಿಸಿದ ಮೇಲ್ಮೈಯನ್ನು ದರ್ಪಣ ಎನ್ನುವರು. ದರ್ಪಣದ ಮೇಲೆ ಬಿದ್ದ ಬೆಳಕಿನ ಹೆಚ್ಚಿನ ಭಾಗ ಪ್ರತಿಪಾಲನವಾಗುತ್ತದೆ.
ಸಮತಲ ದರ್ಪಣಗಳು

ದರ್ಪಣದ ಮೇಲ್ಮೈ ಸಮತಲವಾಗಿದ್ದರೇ ಸಮತಲ ದರ್ಪಣ. ಇದರಲ್ಲಿ ಉಂಟಾಗುವ ಪ್ರತಿಬಿಂಬ ಮಿಥ್ಯ ಪ್ರತಿಬಿಂಭವಾಗಿರುತ್ತದೆ.
ಉಪಯೋಗಗಳು:
• ಅಲಂಕಾರ ದರ್ಪಣಗಳಾಗಿ
• ಸೂಕ್ಷ್ಮ ದರ್ಶಕಗಳಲ್ಲಿ
• ಸೌರ ಒಲೆಗಳಲ್ಲಿ
• ಕ್ಷೌರದ ಅಂಗಡಿಗಳಲ್ಲಿ
ನಿಮ್ನ ದರ್ಪಣಗಳು

ಈ ದರ್ಪಣ ಗೊಲವಾಗಿದ್ದು ತಗ್ಗು ಇರುವ ಕಡೆ ಪ್ರತಿಪಲನವಾಗುತ್ತದೆ.
ಉಪಯೋಗಗಳು
ದೂರದರ್ಶಕಗಳು, ವೈದ್ಯಕೀಯ ಸಲಕರಣೆಗಳು, ಮೋಟಾರು ದೀಪಗಳಲ್ಲಿ ನಿಮ್ನ ದರ್ಪಣ ಬಳಸುತ್ತಾರೆ.
ಪೀನ ದರ್ಪಣ
