Monday, April 8, 2019
ಪ್ರಾಣಿಗಳ ವರ್ಗಿಕರಣ
1. ಸ್ಪಂಜು ಪ್ರಾಣಿಗಳು(Porifera):
• ಇವು ದೇಹಾಂತರವಕಾಶ ಹೊಂದಿದ್ದು ಸಂಕೀರ್ಣ ಅಂಗಾಂಶಗಳು ಮತ್ತು ಅಂಗಗಳಿಂದ ಕೂಡಿದ ದೇಹವನ್ನು ಹೊಂದಿವೆ. ಎಲ್ಲಾ ಕಶೇರುಕಗಳು ಬೆನ್ನಿನ ಭಾಗದಲ್ಲಿ ನರಹುರಿಯನ್ನು ಹೊಂದಿವೆ.
ನರವ್ಯೂಹ (Nervous System)
ನರವ್ಯೂಹ (Nervous System)
• ನರವ್ಯೂಹವು ಜೀವಿಗಳ ಪ್ರಚೋದನಾ ಕ್ರೀಯೆಗೆ ಪ್ರತಿಕ್ರಯಿಸಿ ಎಲ್ಲ ಚಟುವಟಿಕೆಗಳ ಮೇಲೆ ಸಹಭಾಗಿತ್ವ ಮತ್ತು ನಿಯಂತ್ರಣ ಸಾಧೀಸಲು ಕಾರಣವಾಗಿದೆ.
• ನರವೂಹದ ಮೂಲ ಮೂಲ ಘಟಕ ನ್ಯೂರಾನ್. ಇವು ಸಂದೇಶಗಳನ್ನು ವಿದ್ಯುತ್ ಸಂಕೇತಗಳ ರೂಪದಲ್ಲಿ ರವಾನಿಸುತ್ತವೆ. ನ್ಯೂರಾನ್ಗಳಲ್ಲಿ ಜ್ಞಾನವಾಹಿ ,ಕ್ರಿಯಾವಾಹಿ ಮತ್ತು ಮಿಶ್ರವಾಹಿ ಎಂಬ ಮೂರು ವಿಧದ ನ್ಯೂರಾನ್ಗಳಿವೆ. ನ್ಯೂರಾನ್ಗಳಲ್ಲಿ ಗ್ರಾಹಕಗಳು ಪ್ರಚೋದನೆಗಳನ್ನು ಸ್ವಿಕರಿಸುತ್ತವೆ ಹಾಗೂ ಕಾರ್ಯನಿರ್ವಾಹಕಗಳು ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸುತ್ತವೆ.
ಮಾನವನ ನರವ್ಯೂಹದಲ್ಲಿ ಮೂರು ಮುಖ್ಯ ಭಾಗಗಳಿವೆ.
1. ಕೇ೦ದ್ರ ನರವ್ಯೂಹ (Central Nervous System-CNS)
2. ಪರಿಧಿ ನರವ್ಯೂಹ (Peripheral Nervous System-PNS)
3. ಸ್ವಯ೦ ನಿಯ೦ತ್ರಕ ನರವ್ಯೂಹ (Autonomic Nervous System-ANS)
1. ಕೇಂದ್ರ ನರವ್ಯೂಹ
• ಕೇ೦ದ್ರ ನರವ್ಯೂಹವು ಮೆದುಳು ಮತ್ತು ಮೆದುಳುಬಳ್ಳಿಯನ್ನು ಒಳಗೊ೦ಡಿದೆ.
• ಮೆದುಳು ಮತ್ತು ಮೆದುಳುಬಳ್ಳಿಯು ಮೂರು ಹೊದಿಕೆಗಳಿ೦ದಾಗಿವೆ.ಅವುಗಳೆ೦ದರೆ,
1. ಡ್ಯೂರಾಮೇಟರ್ (Duramator)-ಮೇಲ್ಪದರ
2. ಅರಕ್ ನಾಯ್ಡ್ (Arachnoid)-ಮಧ್ಯಪದರ
3. ಪಯಾಮೇಟರ್ (Piamator)-ಒಳಪದರ
• ಈ ಮೂರು ಪದರಗಳನ್ನು ಒಟ್ಟಾಗಿ 'ಕ್ರೇನಿಯಲ್ ಮೆನೆ೦ಜಿಸ್' ಎನ್ನುವರು.
• ಈ ಹೊದಿಕೆಗಳ ನಡುವೆ ಮೆದುಳಿಗೂ-ಮೆದುಳುಬಳ್ಳಿಗೂ ಚಲಿಸುವ 'ಸೆರಿಬ್ರೋಸ್ಪೈನಲ್' ಎ೦ಬ ದ್ರವವು ಮೆದುಳು ಹಾಗೂ ಮೆದುಳುಬಳ್ಳಿಯನ್ನು ಗಾಯಗಳಿ೦ದ ರಕ್ಷಿಸುವುದಲ್ಲದೆ, ನರಗಳಿಗೆ ಪೋಷಕಾ೦ಶಗಳನ್ನು ಒದಗಿಸಲು ಸಹಾಯಕ."
ಮೆದುಳು
• ಮೆದುಳು ನಮ್ಮ ದೇಹದ ಕೇ೦ದ್ರೀಯ ಮಾಹಿತಿಯನ್ನು ನೀಡುವ ಹಾಗೂ ದೇಹದಲ್ಲಿ 'ಆದೇಶ ಮತ್ತು ನಿಯ೦ತ್ರಣ'ವನ್ನು ನೀಡುವ ಏಕಮಾತ್ರ ಅ೦ಗವಾಗಿದೆ.
• ಇದು ಸ್ವಯ೦ಪ್ರೇರಿತ ಚಲನೆ, ದೇಹದ ಸಮತೋಲನ, ಪ್ರಮುಖ ಅನೈಚ್ಛಿಕ ಅ೦ಗಗಳ ಕಾರ್ಯಚಟುವಟಿಕೆಗಳು, ಹಸಿವು-ಬಾಯರಿಕೆ, ಮರುಕಳಿಸುವ ಲಯ, ಮಾನವನ ನಡವಳಿಕೆ ಹಾಗೂ ಹಲವಾರು ಅ೦ತಃಸ್ರಾವಕ ಗ್ರ೦ಥಿಗಳ ಕಾರ್ಯ ನಿರ್ವಹಣೆಯನ್ನು ನಿಯ೦ತ್ರಿಸುತ್ತದೆ. ಅಷ್ಟೇಅಲ್ಲದೆ ದೃಷ್ಟಿ, ಶ್ರವಣ, ಮಾತು, ಬುದ್ಧಿವ೦ತಿಕೆ, ಭಾವನೆ -ಇವೆಲ್ಲದರ ತಾಣವಾಗಿದೆ.
• ವಯಸ್ಕ ಮಾನವನ ಮೆದುಳಿನ ತೂಕ ಸುಮಾರು 1400 ಗ್ರಾ೦ಗಳು.
• ಮಾನವನ ಮೆದುಳು ತಲೆಬುರುಡೆಯಿ೦ದ ರಕ್ಷಿಸಲ್ಪಟ್ಟಿದೆ. ಮೆದುಳು ಮೂರು ಮುಖ್ಯ ಭಾಗಗಳಿ೦ದ ಕೂಡಿದೆ.ಅವು,
1. ಮುಮ್ಮೆದುಳು
2. ಮಧ್ಯಮೆದುಳು
3. ಹಿಮ್ಮೆದುಳು
1) ಮುಮ್ಮೆದುಳು
• ಮುಮ್ಮೆದುಳು ಮಹಾಮಸ್ತಿಷ್ಕ(ಸೆರಿಬ್ರಮ್) ಮತ್ತು ಡೈಎನ್ ಸೆಫೆಲಾನ್ ಎ೦ಬ ಎರಡು ಭಾಗಗಳಿ೦ದಾಗಿದೆ.
1. ಮಹಾಮಸ್ತಿಷ್ಕ (Cerebrum): ಇದು ಮೆದುಳಿನ ಅತ್ಯ೦ತ ದೊಡ್ಡ ಹಾಗೂ ಪ್ರಮುಖ ಭಾಗ. ಮಹಾಮಸ್ತಿಷ್ಕ ಎಡ ಮತ್ತು ಬಲ ಗೋಳಾರ್ಧಗಳಾಗಿ ಇಬ್ಭಾಗವಾಗಿದೆ. ಪ್ರತೀ ಗೋಳಾರ್ಧಗಳೂ 'ಕಾರ್ಪಸ್ ಕಲ್ಲಾಸಮ್' ಎ೦ಬ ನರತ೦ತುಗಳಿಗೆ ಸ೦ಪರ್ಕವನ್ನೊಳಗೊ೦ಡಿದೆ. ಈ ಎರಡೂ ಗೋಳಾರ್ಧಗಳೂ ಜೀವಕೋಶಗಳ ಪದರಗಳಿ೦ದ ಆವರಿಸಲ್ಪಟ್ಟಿದೆ.ಅವೆ೦ದರೆ, ಹೊರಗಿನ ತೊಗಟೆ ಅಥವಾ ಕಾರ್ಟೆಕ್ಸ್ ಮತ್ತು ಒಳಗಿನ ಮೆಡುಲ್ಲಾ. ಕಾರ್ಟೆಕ್ಸ್ ಭಾಗವು ನರಕೋಶಗಳಿ೦ದ ಕೂಡಿದ ಬೂದು ಬಣ್ಣದ ವಸ್ತುವಿನಿ೦ದ ರಚಿತವಾಗಿದ್ದು, ಮಡಿಕೆಗಳನ್ನು ಹೊ೦ದಿದೆ. ಕಾರ್ಟೆಕ್ಸ್ ಭಾಗವು ಕೆಲವು ಕಾರ್ಯನಿರ್ವಹಣಾ ಮತ್ತು ಸ೦ವೇದನಾ ಪ್ರದೇಶಗಳನ್ನೊಳಗೊ೦ಡಿದ್ದು, ಈ ಪ್ರದೇಶವನ್ನು 'ಅಸೋಸಿಯೇಶನ್ ಏರಿಯಾ' ಎನ್ನುವರು. ಈ ಪ್ರದೇಶವು ಜ್ಞಾಪಕಶಕ್ತಿ, ಸ೦ವಹನಕ್ರಿಯೆಗಳಿಗೆ ಸಹಾಯಕ. ಮೆಡುಲ್ಲಾ ಭಾಗದಲ್ಲಿ ಆಕ್ಸಾನ್ ಮತ್ತು ಡೆ೦ಡ್ರೈಟುಗಳನ್ನೊಳಗೊ೦ಡ ನರಕೋಶದ ತ೦ತುಗಳು ಸೇರಿದ ಬಿಳಿವಸ್ತುವಿನಿ೦ದ ರಚಿತವಾಗಿದೆ. ಮಹಾಮಸ್ತಿಷ್ಕವು ಬುದ್ಧಿಶಕ್ತಿಯ ಕೇ೦ದ್ರವಾಗಿದ್ದು, ಅದರಿ೦ದ ಆಲೋಚನೆ, ಕಲ್ಪನೆ, ತೀರ್ಮಾನ, ಕಲಿಕೆಗೆ ಸಹಾಯಕ. ಇಲ್ಲಿ ಬೇರೆ-ಬೇರೆ ಕಾರ್ಯಗಳಿಗೆ ಪ್ರತ್ಯೇಕ ಕೇ೦ದ್ರಗಳಿದ್ದು, ಇವುಗಳಲ್ಲಿ ಯಾವುದಾದರೊ೦ದು ಕೇ೦ದ್ರವು ಹಾನಿಗೊ೦ಡರೆ ಅದಕ್ಕೆ ಸ೦ಬ೦ಧಪಟ್ಟ ಕ್ರಿಯಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.ದೇಹದ ಎಡಭಾಗದಿ೦ದ ಬರುವ ನರಗಳು ಬಲಗೋಳಾರ್ಧಕ್ಕೂ, ಬಲಭಾಗದಿ೦ದ ಬರುವ ನರಗಳು ಎಡ ಗೋಳಾರ್ಧಕ್ಕೂ ಸ೦ಪರ್ಕ ಹೊ೦ದಿರುವುದರಿ೦ದ, ಎಡ ಗೋಳಾರ್ಧಕ್ಕೆ ಪೆಟ್ಟಾದರೆ ಬಲಭಾಗದ ಅ೦ಗಗಳು ಮತ್ತು ಬಲಗೋಳಾರ್ಧಕ್ಕೆ ಪೆಟ್ಟಾದರೆ ಎಡಭಾಗದ ಅ೦ಗಗಳು ಪಾರ್ಶ್ವವಾಯು ಪೀಡಿತವಾಗುತ್ತದೆ.
2. ಡೈಎನ್ ಸೆಫೆಲಾನ್ (Diensephalon): ಇದು ಮಧ್ಯ ಮೆದುಳಿನ ಮು೦ದೆ ಮತ್ತು ಮೇಲೆ ಇದೆ. ಇದರಲ್ಲಿ ಥಲಾಮಸ್ ಮತ್ತು ಹೈಪೋಥಲಾಮಸ್ ಎ೦ಬ ಭಾಗಗಳಿವೆ. ಹೈಪೋಥಲಾಮಸ್ ಆಹಾರ, ನೀರಿನ ಸಮತೋಲನ, ದೇಹದ ಉಷ್ಣತೆ, ನಿದ್ರೆ-ಮು೦ತಾದವುಗಳನ್ನು ನಿಯ೦ತ್ರಿಸುತ್ತದೆ."
2) ಮಧ್ಯಮೆದುಳು
• ಇದು ಮೆದುಳಿನ ಅತ್ಯ೦ತ ಚಿಕ್ಕ ಭಾಗ.
• ಮಧ್ಯಮೆದುಳು ಮುಮ್ಮೆದುಳಿನ ಥಲಾಮಸ್ ಮತ್ತು ಹಿಮ್ಮೆದುಳಿನ ಪಾನ್ಸ್ ನ ಮಧ್ಯದಲ್ಲಿದೆ. 'ಸೆರೆಬ್ರಲ್ ಅಕ್ವಡಕ್ಟ್' ಎ೦ಬ ನಾಳವು ಮಧ್ಯಮೆದುಳಿನಿ೦ದ ಹಾದುಹೋಗುತ್ತದೆ.
• ಮಧ್ಯ ಮೆದುಳು ಹಿಮ್ಮೆದುಳಿನಿ೦ದ ಮುಮ್ಮೆದುಳಿಗೆ ಸ೦ದೇಶವನ್ನು ಸಾಗಿಸುತ್ತದೆ.
3) ಹಿಮ್ಮೆದುಳು
• ಹಿಮ್ಮೆದುಳಿನಲ್ಲಿ ಮೂರು ಭಾಗಗಳಿವೆ.
1. ಪಾನ್ಸ್ (Pons): ಮಹಾಮಸ್ತಿಷ್ಕ, ಅನುಮಸ್ತಿಷ್ಕ ಹಾಗೂ ಮೆಡುಲ್ಲಾದ ನಡುವಿನ ಮಧ್ಯವರ್ತಿಯಾಗಿದೆ. ಆಹಾರ ಅಗಿಯುವುದು, ಉಸಿರಾಟ, ಮುಖದ ಭಾವ ಮು೦ತಾದವುಗಳ ಹತೋಟಿಯ ಜೊತೆಗೆ, ಸ೦ದೇಶ ಸಾಗಾಣಿಕಾ ಮಾರ್ಗವಾಗಿದೆ.
2. ಅನುಮಸ್ತಿಷ್ಕ (Cerebellum): ಅನುಮಸ್ತಿಷ್ಕವು ಸುರುಳಿಯಾಕಾರದ ಮೇಲ್ಮೈ ಹೊ೦ದಿದ್ದು, ಅದು ಅನೇಕ ನ್ಯೂರಾನ್ ಗಳಿಗೆ ಹೆಚ್ಚುವರಿ ಜಾಗವನ್ನು ನೀಡುತ್ತದೆ. ಶರೀರದ ಸಮತೋಲನದ ಜೊತೆಗೆ, ನಡೆಯುವ, ಓಡುವ ಮು೦ತಾದ ಚಲನೆಗಳಿಗೆ ಅಗತ್ಯವಾದ ಕಾರ್ಯ ಹೊ೦ದಾಣಿಕೆಯನ್ನು ಏರ್ಪಡಿಸುತ್ತದೆ
3. ಮಣಿಶಿರ (Medulla Oblangata): ಇದು ಮೆದುಳು ಬಳ್ಳಿಗೆ ಸ೦ಪರ್ಕ ಹೊ೦ದಿದೆ. ಉಸಿರಾಟ, ರಕ್ತದೊತ್ತಡ, ಜೀರ್ಣಕ್ರಿಯೆಯ ಸ್ರವಿಸುವಿಕೆಗೆ ಸಹಾಯಕ.
2.ಪರಧಿ ನರವ್ಯೂಹ
• ಇದು ದೇಹದಲ್ಲಿರುವ ಎಲ್ಲಾ ನರಗಳನ್ನು ಒಳಗೊಂಡ ಭಾಗವಾಗಿದೆ.ಇವು ದೇಹದ ಎಲ್ಲ ಕ್ರೀಯೆಗಳನ್ನು ನಿಯಂತ್ರಿಸುವ ಸಂಪರ್ಕ ಜಾಲವಾಗಿದೆ.
3. ಸ್ವಯ೦ ನಿಯ೦ತ್ರಕ ನರವ್ಯೂಹ
• ಇದು ತನ್ನಷ್ಟಕ್ಕೆ ತಾನೇ ಸ್ವಯಂ ನಿಯಂತ್ರಿಸಿಕೊಳ್ಳುವ ನರವ್ಯೂಹವಾಗಿದೆ.ಇದು ದೇಹದ ಬಹುತೇಕ ಎಲ್ಲ ಭಾಗಗಳಾದ ತಲೆ,ಹೃದಯ,ರಕ್ತನಾಳಗಳು,ಜೀರ್ಣಾಂಗ ವ್ಯೂಹ,ಶ್ವಾಸ ಕೋಶಗಳು,ಮೂತ್ರ ಕೋಶ,ಗ್ರಂಧಿಗಳು ಮತ್ತು ಚರ್ಮದ ಭಾಗಗಳಿಗೆ ಸಂಪರ್ಕ ಹೊಂದಿದೆ.
ನೆನಪಿಡಬೇಕಾದ ಅಂಶಗಳು
• ನರಮಂಡಲದಲ್ಲಿರುವ ಮುಖ್ಯವಾದ ಎರಡು ವಿಧಾನಗಳೆಂದರೆ - ಪರಿಧಿಯ ನರಮಂಡಲ, ಕೇಂದ್ರೀಯ ನರಮಂಡಲ
• ಕೇಂದ್ರೀಯ ನರಮಂಡಲವು ಆಗಿರುವುದು – ಮೆದುಳು ಮತ್ತು ಮೆದುಳುಬಳ್ಳಿಗಳಿಂದ
• ಸೆರೆಬ್ರಮ್ದಲ್ಲಿರುವ ಎರಡು ಭಾಗಗಳೆಂದರೆ - ಹೊರಗಿನ ತೊಗಟೆ ಅಥವಾ ಕಾರ್ಟೆಕ್ಸ್ ಮತ್ತು ಮೆಡುಲ್ಲಾ
• ನ್ಯೂರಾನ್ ಗಳಿಗೆ ಸಂದೇಶ ಕೊಂಡೊಯ್ಯುವುದು – ಡೆಂಡ್ರೈಟ್ಸ್
• ನ್ಯೂರಾನ್ಗಳಿಂದ ಸಂದೇಶಗಳನ್ನು ಹೊರತೆ ಸಾಗಿಸುವುವು – ಆಕ್ಸಾನ್ಗಳು
• ಹೃದಯದ ಸಂಕೋಚನೆ ಮತ್ತು ವಿಕಸನ ಕ್ರಿಯೆ ನಡೆಯುವಾಗ ಹೃದಯದ ಸ್ನಾಯುವು ಸೂಕ್ಷವಾದ ವಿದ್ಯುತ್ ತರಂಗಗಳನ್ನು ಸೃಷ್ಟಿಸುತ್ತದೆ. ಇದನ್ನು ಅಳೆಯುವ ಉಪಕರಣ – ಇಸಿಜಿ
• ಮೆದುಳಿನಲ್ಲಿರುವ ಅತ್ಯಂತ ದೊಡ್ಡ ಭಾಗ - ಸೆರಬ್ರಮ್
• ರಕ್ತ ದೊತ್ತಡ ಅಳೆಯುವ ಉಪಕರಣ - ಸ್ಪಗ್ಮೋ ಮ್ಯಾನೋಮೀಟರ್
• ಮಾನವನ ಹೃದಯದಲ್ಲಿರುವ ನಾಲ್ಕು ಕೋಣೆಗಳು – ಮೇಲಿನ ಎರಡು ಕೋಣೆಗಳು ಹೃತ್ಕರ್ಣಗಳು, ಕೆಳಗಿನ ಎರಡು ಕೋಣೆಗಳು ಹೃತ್ಕುಕ್ಷಿಗಳು
• ಡೈಯೆನ್ ಸೆಫಲಾನ್ನಲ್ಲಿರುವ ಮೂರು ವಿಭಾಗಗಳು – ಎಪಿಥಲಾಮಸ್, ಥಲಾಮಸ್ ಮತ್ತು ಹೈಪೊಥಲಾಮಸ್
• ಮುಮ್ಮೆದುಳು ಹಾಗೂ ಹಿಮ್ಮೆದುಳಿಗೆ ಸಂಬಂಧ ಏರ್ಪಡಿಸುವ ನರಂತಂತುಗಳಂದ ಕೂಡಿದ ಸಣ್ಣ ಭಾಗವೇ – ಮಧ್ಯ ಮೆದುಳು
• ಹೃದಯದ ಸ್ನಾಯುಗಳ ಸಂಕೋಚನ ಕ್ರಿಯೆಗೆ ಹೀಗೆನ್ನುವರು - ಸಿಸ್ಟೋಲ್
• ಮಹಾಮಸ್ತಿಷ್ಕ, ಅನುಮಸ್ತಿಷ್ಕ ಮತ್ತು ಮೆಡುಲ್ಲಾದ ನಡುವಿನ ಸಂಪರ್ಕ ಮಧ್ಯವರ್ತಿಯಾಗಿ ಕೆಲಸ ಮಾಡುವುದು - ಪಾನ
• ಶರೀರದ ಸಮತೋಲವನ್ನು ಕಾಪಾಡಿ, ನಡೆಯುವುದು, ಓಡುವುದು ಮುಂತಾದ ಚಲನೆಗಳಿಗೆ – ಅಗತ್ಯವಾದ ಸ್ನಾಯಗಳ ಕಾರ್ಯದ ಹೊಂದಾಣಿಕೆಯನ್ನು ಏರ್ಪಡಿಸುವ ಮೆದುಳಿನ ಭಾಗ – ಅನುಮಸ್ತಿಷ್ಕ
ಜ್ಞಾನೇಂದ್ರಿಯಗಳು (Sense Organs)
ಜ್ಞಾನೇಂದ್ರಿಯಗಳು (Sense Organs)
• ಜ್ಞಾನೇಂದ್ರಿಯಗಳು ಪರಿಸರವನ್ನು ಅರ್ಥೈಸಿಕೊಂಡು ಅದರ ತಕ್ಕಂತೆ ಹೊಂದಿಕೊಳ್ಳಲು ಸಹಾಯ ಮಾಡುವ ವಿಶೇಷ ಅಂಗಗಳಾಗಿವೆ. ದೇಹದಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಒಟ್ಟು ಐದು ಜ್ಞಾನೇಂದ್ರಿಯಗಳಿವೆ.
ಕಣ್ಣು
ಕಣ್ಣುಗಳು ದೃಷ್ಟಿಯ ಜ್ಞಾನೇಂದ್ರಿಯಗಳಾಗಿದ್ದು ವಸ್ತುವಿನ ಬಣ್ಣ, ಗಾತ್ರ ಮತ್ತು ದೂರದ ಅರಿವು, ಮಾಡಲು ಸಹಕಾರಿಯಾಗಿವೆ.
ಕಣ್ಣಿನ ಮುಖ್ಯ ಭಾಗಗಳು:
1. ಸ್ಕ್ಲೀರಾ:
• ಕಣ್ಣಿನ ಅತ್ಯಂತ ಹೊರಪದರವಾಗಿದ್ದು ಬಿಳಿ ಬಣ್ಣದಾಗಿದೆ. ಕಣ್ಣುಗುಡ್ಡೆಯ ಮುಂಭಾಗದ ತೆಳುವಾದ ಪೊರೆಯನ್ನು ಕಾರ್ನಿಯಾ ಎಂದು ಕರೆಯುಲಾಗುತ್ತದೆ.
2. ಕೊರಾಯಿಡ್:
• ಮಧ್ಯದಲ್ಲಿರುವ ಎರಡನೆಯ ಪದರವಾಗಿದ್ದು, ಹೆಚ್ಚು ರಕ್ತನಾಳ ಮತ್ತು ನರಗಳಿಂದ ಕೂಡಿದೆ ಹಾಗೂ ಕಣ್ಣಿನ ಮಧ್ಯಭಾಗ ಬಿಟ್ಟು ಉಳಿದ ಭಾಗಗಳನ್ನು ಆವರಿಸುತ್ತದೆ.
• ಮಧ್ಯಭಾಗದ ರಚನೆಯನ್ನು ಕಣ್ಣುಪಾಪೆ (ಠಿuಠಿiಟ) ಎಂದು ಕರೆಯಲಾಗುತ್ತದೆ. ಇದರ ಮೂಲಕವೇ ಬೆಳಕು, ಕಣ್ಣಿನ ಗುಡ್ಡೆಯೊಳಕ್ಕೆ ಹಾದುಹೋಗುತ್ತದೆ.
• ಕಣ್ಣು ಗುಡ್ಡೆಯ ಮುಂಭಾಗದಲ್ಲಿ, ಸ್ನಾಯುವಿನ ಒಂದು ಪದರವನ್ನು ಕೊರಾಯಿಡ್ ರಚಿಸಿದೆ. ಇದನ್ನು ವರ್ಣಪಟಲ ಎಂದು ಕರೆಯಲಾಗುತ್ತದೆ. ಕಣ್ಣಿನ ವಿವಿಧ ಬಣ್ಣಗಳಿಗೆ ವರ್ಣಪಟಲದಲ್ಲಿರುವ ಬಣ್ಣದ ವಸ್ತುಗಳು ಕಾರಣವಾಗುತ್ತವೆ.
3. ಅಕ್ಷಿಪಟಲ:
• ಇದರಲ್ಲಿ ರಾಡ್ ಮತ್ತು ಕೋನ್ಗಳಿವೆ. ರಾಡ್ ಕೋಶಗಳು ಮಂದವಾದ ಬೆಳಕನ್ನು ಗ್ರಹಿಸಬಲ್ಲವು. ಕೋನ್Àಗಳು, ಪ್ರಕಾಶಮಾನವಾದ ಬೆಳಕನ್ನು ಗ್ರಹಿಸಬಲ್ಲವು ಮತ್ತು ಬಣ್ಣಗಳನ್ನು ಗುರುತಿಸಬಲ್ಲವು.
• ಕಣ್ಣೀರನ್ನು ಅಶ್ರುಗ್ರಂಥಿ ಸ್ರವಿಸುತ್ತವೆ.
ಕಿವಿ
• ಕಿವಿ ಒಂದು ಶ್ರವಣಾಂಗವಾಗಿದ್ದು, ಶಬ್ದವನ್ನು ಗ್ರಹಿಸುವುದರ ಜೊತೆಗೆ ದೇಹದ ಸಮತೋಲನವನ್ನು ಕಾಪಾಡುತ್ತವೆ.
• ಕಿವಿಯ ಹೊರಕಿವಿ ಮಧ್ಯಕಿವಿ ಮತ್ತು ಒಳಕಿವಿ ಎಂಬ ಮೂರು ಮುಖ್ಯ ಭಾಗಗಳನ್ನು ಹೊಂದಿದೆ.
• ಹೊರಕಿವಿಯಲ್ಲಿ ಕಿವಿಯ ಹಾಲೆ ಮತ್ತು ಕರ್ಣನಾಳಗಳಿವೆ.
• ಮಧ್ಯಕಿವಿಯು ಒಂದು ಚಿಕ್ಕ ಪ್ರದೇಶವಾಗಿದ್ದು ಕಿವಿಯ ತಮಟೆ ಮತ್ತು ಮೂರು ಚಿಕ್ಕ ಮೂಳೆಗಳಿಂದಾದ ಒಂದು ಸರಪಳಿಯನ್ನು ಹೊಂದಿದೆ.
• ಒಳಕಿವಿಯು ಒಂದು ಸೂಕ್ಷ್ಮವಾದ ಅಂಗವಾಗಿದ್ದು ಒಳಗೆ ಎಂಡೋಲಿಂಫ್ ಎಂಬ ದ್ರವವನ್ನು ಹೊಂದಿದ್ದು ಪೆರಿಲಿಂಫ್ ಎಂಬ ಇನ್ನೊಂದು ದ್ರವದಿಂದ ಆವೃತವಾಗಿದೆ. ಒಳಕಿವಿಯು ಮಾನವನ ದೇಹದ ಸಮತೋಲನೆಗೆ ಸಂಬಂಧಿಸಿದೆ.
ಮೂಗು
• ಮೂಗು ವಾಸನೆಯನ್ನು ಗ್ರಹಿಸುವ ಜ್ಞಾನೇಂದ್ರಿವಾಗಿದ್ದು, ಉಸಿರಾಡಲೂ ಸಹಾಯಕವಾಗಿರುವ ಅಂಗವಾಗಿದೆ.
• ಮೂಗಿನ ಒಳ ಗೋಡೆಯಲ್ಲಿ ರೋಮಗಳ ಪದರ ಮತ್ತು ಶ್ಲೇಷ್ಮ ಗ್ರಂಥಿಗಳಿವೆ.ರೋಮಗಳ ಪದರವು ಗಾಳಿಯನ್ನು ಶೋಧಿಸಿ ಶುದ್ಧ ಗಾಳಿಯನ್ನು ಮಾತ್ರ ಶ್ವಾಸಕಾಂಗದ ಒಳಗಡೆಗೆ ಕಳುಹಿಸುತ್ತದೆ.
ನಾಲಿಗೆ
• ನಾಲಿಗೆಯು ರುಚಿಯನ್ನು ಗ್ರಹಿಸುವ ಜ್ಞಾನೇಂದ್ರಿವಾಗಿದ್ದು, ರುಚಿಯ ಗ್ರಾಹಕಗಳು ಅಂದರೆ ರಸಾಂಕುರಗಳನ್ನು ಹೊಂದಿದೆ.
• ನಾಲಿಗೆಯ ಮುಂಭಾಗದಲ್ಲಿ ಸಿಹಿಯನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಮುಂಭಾಗದ ಅಂಚಿನಲೂ ಉಪ್ಪನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಪಾಶ್ರ್ಚಭಾಗದಲ್ಲಿ ಹುಳಿರುಚಿಯನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಹಿಂಭಾಗದಲ್ಲಿ ಕಹಿರುಚಿಯನ್ನು ಗ್ರಹಿಸುವ ರಸಾಂಕುರಗಳು ಇವೆ.
ಚರ್ಮ
• ಚರ್ಮವು ಸ್ಪರ್ಶದ ಜ್ಞಾನೇಂದ್ರಿಯವಾಗಿದ್ದು, ನರತುದಿಗಳಿಂದ ಕೂಡಿದ ಸ್ಪರ್ಶಗ್ರಾಹಕಗಳು ಚರ್ಮದ ಮೇಲೆಲ್ಲಾ ಹರಡಿವೆ. ಸ್ಪರ್ಶ, ಒತ್ತಡ, ನೋವು, ಕಾವು, ತಂಪು- ಇವುಗಳ ಜ್ಞಾನವನ್ನು ಚರ್ಮ ಅರಿಯುತ್ತದೆ.
• ಮಾನವ ಚರ್ಮದ ಕಾರ್ಯಗಳು :
• ಶರೀರದ ಒಳ ಭಾಗದಲ್ಲಿರುವ ಅಂಗಾಂಶಗಳನ್ನು ಯಾಂತ್ರಿಕ ಆಘಾತಗಳಿಂದ ಸೂರ್ಯನ ನೇರಳಾತೀತ ಕಿರಣಗಳಿಂದ ಮತ್ತು ಸೂಕ್ಶ್ಮಾಣು ಜೀವಿಗಳ ಸೋಕಿನಿಂದ ರಕ್ಷಿಸುತ್ತವೆ.
• ಶಾಖ,ಸ್ಪರ್ಶ,ನೋವು ಮುಂತಾದ ಪ್ರಚೋದನೆಗಳನ್ನು ಗ್ರಹಿಸುತ್ತದೆ.
• ಬೆವರನ್ನು ಹೊರ ಹಾಕುವ ಮೂಲಕ ದೇಹದ ಉಷ್ಣಾoಶವನ್ನು ಒಂದೇ ಸಮನಾಗಿರುವಂತೆ ರಕ್ಷಿಸುತ್ತದೆ.
ನಿರ್ನಾಳ ಗ್ರಂಥಿಗಳ ವ್ಯೂಹ (Endocrine System)
ನಿರ್ನಾಳ ಗ್ರಂಥಿಗಳ ವ್ಯೂಹ (Endocrine System)
ಪ್ರಾಣಿಗಳಲ್ಲಿ ರಾಸಾಯನಿಕ ಹೊಂದಾಣಿಕೆಯು ನಿರ್ನಾಳ ಗ್ರಂಥಿಗಳು ಉಂಟುಮಾಡುವ ರಾಸಾಯನಿಕಗಳು ಅಂದರೆ ಹಾರ್ಮೋನುಗಳಿಂದ ಉಂಟಾಗುತ್ತದೆ. ಹಾರ್ಮೋನುಗಳು ನಿರ್ನಾಳ ಗ್ರಂಥಿಗಳು ಸ್ರವಿಸುವ ವಿಶೇಷ ರಾಸಾಯನಿಕ ವಸ್ತುಗಳಾಗಿದ್ದು, ರಕ್ತದ ಮೂಲಕ ಅಂಗಗಳಿಗೆ ತಲುಪಿ ಅವುಗಳ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ.
1. ಪಿಟ್ಯೂಟರಿ ಗ್ರಂಥಿ
• ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ.
• ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.
• ಪಿಟ್ಯೂಟರಿ ಗ್ರಂಥಿಯ ಹಾರ್ಮೋನುಗಳು :-
• ಬೆಳವಣಿಗೆಯ ಹಾರ್ಮೋನು : ಇದು ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
• ಥೈರಾಯಿಡ್ ಹಾರ್ಮೋನು: ಇದು ಥೈರಾಯಿಡ್ ಗ್ರಂಥಿಯು ಹಾರ್ಮೋನನ್ನು ಸ್ರವಿಸುತ್ತದೆ.
• ಅಡ್ರಿನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನು ಇದು ಆಡ್ರಿನಲ್ ಗ್ರಂಥಿಗಳ ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸುತ್ತದೆ.
• ಮೆಲನೋಸೈಟ್ ಹಾರ್ಮೋನು: ಇದು ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯಾಗುವುದನ್ನು ಹತೋಟಿಯಲ್ಲಿಡುತ್ತದೆ.
• ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈ ಯುರೆಟಿಕ್ ಹಾರ್ಮೋನನ್ನು ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.
• ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.
2. ಥೈರಾಯಿಡ್ ಗ್ರಂಥಿ
• ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ.
• ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.
• ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.
• ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.
3. ಪ್ಯಾರಾಥೈರಾಯಿಡ್ ಗ್ರಂಥಿಗಳು
• ಪ್ಯಾರಾಥಾರ್ಮೋನಿನ ಕಾರ್ಯ, ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಂತ್ರಿಸುವುದು.
• ಈ ಹಾರ್ಮೋನಿನ ಕೊರತೆಯಿಂದ ನೋವಿನಿಂದ ಕೂಡಿದ ಸ್ನಾಯು ಸೆಡೆತ ಕಂಡು ಬರುತ್ತದೆ. ಪ್ಯಾರಾಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.
4. ಲ್ಯಾಂಗರ್ ಹಾನ್ಸ್‌ನ ಕಿರು ದ್ವೀಪಗಳು
• ಈ ಗ್ರಂಥಿಗಳು ಚಿಕ್ಕದಾಗಿದ್ದು ಮೇದೋಜೀರಕದಲ್ಲಿ ಅಡಕವಾಗಿದೆ.
• ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.
• ಲ್ಯಾಂಗರ್ ಹಾನ್ಸ್ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಡಯಾಬಿಟಿಸ್ ರೋಗ ಉಂಟಾಗುತ್ತದೆ.
• ಇನ್ಸುಲಿನ್ ಗ್ಲೂಕೋಸ್ ಅನ್ನು ಗ್ಲೈಕೊಜನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗ್ಲೈಕೊಜನ್ ಯಕೃತ್ ಮತ್ತು ಸ್ನಾಯುಗಳಲ್ಲಿಸಂಗ್ರಹವಾಗಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ನ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
• ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.
• ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.
5. ಅಡ್ರಿನಲ್ ಗ್ರಂಥಿಗಳು
• ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ.
• ಕಾರ್ಟೆಕ್ಸ್ ಎಂಬ ಹೊರಭಾಗ ಹಾಗೂ ಮೆಡುಲ್ಲಾ ಎಂಬ ಒಳಭಾಗ ಇದೆ.
• ಕಾರ್ಟೆಕ್ಸ್ ಸ್ರವಿಸುವ ಅನೇಕ ಹಾರ್ಮೋನುಗಳಲ್ಲಿ ಕಾರ್ಟಿಸೋನ್ ಒಂದು.
• ಅಡ್ರಿನಲ್ " ಮೆಡುಲ್ಲಾ ಆಡ್ರಿನಲಿನ್, ಭಾರತ ಅಡ್ರಿನಲಿನ್ ಮತ್ತು ಡೊಪಮಿನ್ ಎಂಬ ಮೂರು ಹಾರ್ಮೋನುಗಳನ್ನು ಸ್ರವಿಸುತ್ತದೆ.
6.ಜನನ ಗ್ರಂಥಿಗಳು
• ಪುರುಷ ಸಂಬಂಧಿ ಹಾರ್ಮೋನುಗಳಿಗೆ ಆಂಡ್ರೋಜನ್ಗಳು ಎಂದು ಕರೆಯಲಾಗುತ್ತದೆ ಹಾಗು ಇವುಗಳನ್ನು ವೃಷಣಗಳು ಉತ್ಪತ್ತಿ ಮಾಡುತ್ತವೆ. ಇವುಗಳಲ್ಲಿ ಟೆಸ್ಟೋಸ್ಟೀರಾನ್ ಎಂಬ ಹಾರ್ಮೋನು ಗಂಡಸರ ಲಕ್ಷಣಗಳಿಗೆ ಕಾರಣವಾಗಿವೆ.
• ಮಹಿಳೆ ಸಂಬಂಧಿ ಹಾರ್ಮೋನುಗಳಿಗೆ ಈಸ್ಟ್ರೋಜನ್ ಎಂದು ಕರೆಯಲಾಗುತ್ತದೆ ಹಾಗು ಇವುಗಳನ್ನು ಅಂಡಾಶಯಗಳು ಉತ್ಪತ್ತಿ ಮಾಡುತ್ತವೆ. ಇವುಗಳು ಪ್ರೊಜೆಸ್ಟಿರಾನ್ ಎಂಬ ಹಾರ್ಮೋನ ಸ್ರವಿಸುತ್ತವೆ.
ಡಿ.ಎನ್.ಎ
ಡಿ.ಎನ್.ಎ
• ಡಿ.ಎನ್.ಎ (ಡೀಆಕ್ಸಿ ರೈಬೊ ನ್ಯೂಕ್ಲೀಯಿಕ್ ಆಸಿಡ್) ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ.
• ಡಿಎನ್ಎ-ಆನುವಂಶೀಯತೆಯ ಆಧಾರವಾಗಿದ್ದು, ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಲಕ್ಷಣಗಳನ್ನು ವರ್ಗಾವಣೆ ಮಾಡುತ್ತವೆ.
• ಇದು ಒಂದು ಆನುವಂಶೀಯ ವಸ್ತುವಾಗಿದ್ದು ಆನುವಂಶೀಯ ಮಾಹಿತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ.
• ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್.
• ಡಿ.ಎನ್.ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ.
• ಡಿ ಎನ್ ಎಯ ಎರಡು ಏಳೆಗಳ ನಡುವೆ ಇರುವ ಅಕ್ಷದ ಸುತ್ತು ಸುತ್ತಲಾಗಿದೆ .
• ಜೀವಕೋಶಗಳಲ್ಲಿ ಇವು ಎರಡು ಎಳೆಗಳ ಅಣುಗಳಾಗಿ ಕಂಡು ಬರುತ್ತದೆ.
• ನ್ಯೂಕ್ಲಿಯೋಬೇಸ್ ಡಿ-ಓಕ್ಸಿ ರೈಬೊಸ್ ಶುಗರ್ ಒಂದಿಗೆ ಸೇರಿ ನ್ಯುಕ್ಲಿಯೋಸೈಡ್ ಆಗುತ್ತದೆ.ಈ ನ್ಯುಕ್ಲಿಯೋಸೈಡ್ ಫಾಸ್ಫೇಟ್ ಅಣುವಿನೊಂದಿಗೆ ಸೇರಿ ನ್ಯೂಕ್ಲಿಯೋಟೈಡ್ ಆಗುತ್ತದೆ.
• ಡಿಎನ್ಎ ಅಣುವಿನಲ್ಲಿ ಒಂದು ಜೋಡಿ ಪಾಲಿನ್ಯೂಕ್ಲಿಯೋಟೈಡ್ನ ಸರಪಳಿಗಳಿರುತ್ತವೆ. ಒಂದೊಂದು ನ್ಯೂಕ್ಲಿಯೋಟೈಡ್ ಘಟಕವೂ- (1) ಡಿ ಆಕ್ಸಿರೈಬೋಸ್ ಸಕ್ಕರೆ (2) ಫಾಸ್ಫೇಟ್ ಮತ್ತು (3) ನೈಟ್ರೋಜನ್ ಕ್ಷಾರಗಳು ಎಂಬ ಮೂರು ಸಂಯುಕ್ತಗಳನ್ನು ಹೊಂದಿದೆ.
• ಡಿ.ಎನ್.ಎ ಗಳಲ್ಲಿ ಅಡಿನೈನ್ (A) ಮತ್ತು ಗ್ವಾನಿನ್ (G) ಸೈಟೋಸಿನ್ (S) ಥೈಮೀನ್ (T) ಗಳೆಂಬ ಪ್ರತ್ಯಾಮ್ಲಗಳಿವೆ. ಅಡಿನೈನ್ ಥೈಮೀನ್ (A-T) ಜೊತೆಯಲ್ಲಿ ಮತ್ತು ಗ್ವಾನಿನ್ ಸೈಟೋಸಿನ್ (G-S). ಜೊತೆಯಲ್ಲಿ ಯಾವಾಗಲೂ ಜೋಡಣೆಯಲ್ಲಿರುತ್ತವೆ.
ಡಿ.ಎನ್.ಎ. ಯ ಪ್ರಾಮುಖ್ಯತೆ
1.ಡಿಎನ್ಎ, ಜೀವಕೋಶದ ಎಲ್ಲ ಉಪಾಪಚಯ ಚಟುವಟಿಕೆಗಳನ್ನು ನಿಯಂತ್ರಿಸಲು ಬೇಕಾದ ಸಾಂಕೇತೀಕ ಮಾಹಿತಿಯನ್ನು ಹೊಂದಿರುತ್ತದೆ.
2. ಡಿಎನ್ಎ, ಮುಂದಿನ ಸಂತಾನಗಳಿಗೆ ಒಂದೇ ರೀತಿಯ ಆನುವಂಶೀಯ ವಸ್ತುವನ್ನು ಸಮನಾಗಿ ಹಂಚಿ ಆನುವಂಶೀಯತೆÉಗೆ ಕಾರಣವಾಗುತ್ತದೆ.
3. ಡಿಎನ್ಎ, ಪ್ರೋಟೀನ್ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ.
4. ಡಿಎನ್ಎ - ಉತ್ಪರಿವರ್ತನೆ (mutation)ಮತ್ತು ಪುನರ್ ಸಂಯೋಜನೆ (recombination)ಗೆ ಒಳಗಾಗಿ, ಸಂತಾನಗಳಲ್ಲಿ ಕೆಲವೊಮ್ಮೆ ಭಿನ್ನ ಲಕ್ಷಣಗಳನ್ನುಂಟು ಮಾಡುತ್ತದೆ.
5. ಜೈವಿಕತಂತ್ರಜ್ಞಾನದ ಬೆಳಣಿಗೆಗೆ ಮೂಲ ಘಟಕವಾಗಿದೆ.
ಆಹಾರ
ಆಹಾರ
• ಅಗತ್ಯವಿರುವ ಪೋಷಕ ಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿರುವ ಆಹಾರವನ್ನು ಸಂತುಲಿತ ಆಹಾರ (balanced diet) ಎನ್ನುವರು.
• ಆರೋಗ್ಯಕರ ಆಹಾರವು ಕಾರ್ಬೋ ಹೈಡ್ರೇಟಗಳು, ಪ್ರೋಟ್ರೀನ್ಗಳು, ಜೀವಸತ್ವಗಳು,ನೀರು, ಲಿಪಿಡ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ನಾರು ಪದಾರ್ಥಗಳನ್ನು ಒಳಗೊಂಡಿರುತ್ತದೆ.
1) ಕಾರ್ಬೋಹೈಡ್ರೇಟಗಳು
• ಇವುಗಳನ್ನು ಶರ್ಕರ ಪಿಷ್ಟಗಳು,ಪಿಷ್ಟಗಳು, ಸಕ್ಕರೆಗಳು ಎಂದು ಸಹ ಕರೆಯಲಾಗುತ್ತದೆ.
• ಇವು ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ಗಳಿಂದ ಕೂಡಿವೆ.
• ದೇಹದಲ್ಲಿ ಬಿಡುಗಡೆಯಾಗುವ ಬಹುಪಾಲು ಶಕ್ತಿಯು ಕಾರ್ಬೋಹೈಡ್ರೇಟ್ಗಳಿಂದ ಬರುತ್ತದೆ.
ವಿಧಗಳು
ಕಾರ್ಬೋಹೈಡ್ರೇಟಗಳಲ್ಲಿ 3 ವಿಧಗಳಿವೆ.
1. ಮೋನೊಸ್ಯಾಕರೈಡ್ ಗಳು
2. ಒಲಿಗೋ ಸ್ಯಾಕರೈಡ್ ಗಳು
3. ಪಾಲಿ ಸ್ಯಾಕರೈಡ್ ಗಳು
1. ಮೋನೊಸ್ಯಾಕರೈಡ್ ಗಳು
• ಗ್ಲೂಕೋಸ್ ಅತ್ಯಂತ ಸರಳವಾದ ಸಕ್ಕರೆಯ ಅಣು ಆಗಿದೆ.
• ಇವುಗಳಲ್ಲಿ ಇಂಗಾಲದ ಪರಮಾಣುಗಳು 3 ಅಥವಾ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.. ಗ್ಲೂಕೋಸ್ ಮತ್ತು ಫ್ರಕ್ಟೋಸ್ಗಳನ್ನು ಮೋನೋಸಾಕರೈಡ್ಗಳು ಎನ್ನುವರು.
• ಸರಳ ಸಕ್ಕರೆಯ ಒಂದೇ ಅಣುವನ್ನು ಹೊಂದಿರುವ ಕಾರ್ಬೋಹೈಡ್ರೇಟ್ಗಳನ್ನು ಮೋನೋಸಾಕರೈಡ್ಗಳು ಎಂದು ಕರೆಯಲಾಗುತ್ತದೆ. ಅವುಗಳು ರುಚಿಯಲ್ಲಿ ಸಿಹಿಯಾಗಿದ್ದು ನೀರಿನಲ್ಲಿ ಸುಲಭವಾಗಿ ಬೆರಕೆಯಾಗುತ್ತವೆ.
• ಉದಾ:ರೈಬೋಸ್,ಗ್ಲುಕೋಸ್,ಗ್ಯಾಲಕ್ಟೋಸ್, ಇತ್ಯಾದಿ.
2. ಒಲಿಗೋ ಸ್ಯಾಕರೈಡ್ ಗಳು
• ಸಾಮಾನ್ಯವಾಗಿ ಎರಡರಿಂದ ಹತ್ತು ಮೊನೋಸಾಕರೈಡ್ ಘಟಕಗಳಿಂದ ಕೂಡಿ ಒಲಿಗೋ ಸಾಕರೈಡ್ಗಳು ಆಗಿರುತ್ತವೆ.
• ಲ್ಯಾಕ್ಟೋಸ್,ಸುಕ್ರೋಸ್ ಮತ್ತು ಮಾಲ್ಟೋಸ್ ಒಲಿಗೋ ಸಾಕರೈಡ್ಗಳಿಗೆ ಉದಾಹರಣೆಗಳಾಗಿವೆ.
3. ಪಾಲಿ ಸ್ಯಾಕರೈಡ್ ಗಳು
• ಪಾಲಿ ಸ್ಯಾಕರೈಡ್ ಗಳು ಅನೇಕ ಮೋನೋಸಾಕರೈಡ್ ಘಟಕಗಳಿಂದ(ಹತ್ತಕ್ಕಿಂತ ಹೆಚ್ಚು) ಆಗಿರುತ್ತದೆ.
• ಕೋಶಭಿತ್ತಿಯು ಸೆಲ್ಯುಲೋಸ್ ನಿಂದ ರಚಿಸಲ್ಪಟ್ಟಿರುತ್ತದೆ. ಆದ್ದರಿಂದ ಇದನ್ನು ಪಾಲಿ ಸ್ಯಾಕರೈಡ್ ಗಳು ಎನ್ನುವರು.
• ಮಾನವರೂ ಸೇರಿದಂತೆ ಪ್ರಾಣಿಗಳಲ್ಲಿ ಗ್ಲೈಕೋಜನ್ ಎಂಬ ಪಾಲಿಸಾಕರೈಡ್ ಕಂಡುಬರುತ್ತದೆ. ನಮ್ಮ ದೇಹದಲ್ಲಿ ಗ್ಲೂಕೋಸ್ನ ಪ್ರಮಾಣ ಅಧಿಕವಾದಾಗ, ಅದರ ಸ್ವಲ್ಪ ಭಾಗವು ಗ್ಲೈಕೋಜನ್ ಆಗಿ ಪರಿವರ್ತನೆಗೊಳ್ಳುತ್ತದೆ.
• ಉದಾ:ಪಿಷ್ಟ,ಗ್ಲೈಕೋಜನ್,ಸೆಲ್ಲುಲೋಸ್
ಕಾರ್ಬೋಹೈಡ್ರೇಟ್‍ಗಳ ಪ್ರಾಮುಖ್ಯತೆ
1. ನಮ್ಮ ಎಲ್ಲಾ ಚಟುವಟಿಕೆಗಳಿಗೂ ಗ್ಲೂಕೋಸ್ ಶಕ್ತಿಯ ಪ್ರಧಾನ ಮೂಲವಾಗಿದೆ.
2. ಪಿಷ್ಟ ಮತ್ತು ಗ್ಲೈಕೋಜನ್ಗಳು ಶಕ್ತಿ ಸಂಗ್ರಾಹಕಗಳಾಗಿ ಕೆಲಸ ಮಾಡುತ್ತವೆ.
4. ಸೆಲ್ಯುಲೋಸ್, ಲಿಗ್ನಿನ್ ಮತ್ತು ಪೆಕ್ಟಿನ್ನಂತಹ ಪಾಲಿಸಾಕರೈಡ್ಗಳು ಸಸ್ಯಗಳಲ್ಲಿದ್ದು ನಮ್ಮ ಆಹಾರದಲ್ಲಿ ನಾರು ಪದಾರ್ಥಗಳಾಗಿ ಅವಶ್ಯಕವಾಗಿವೆ.
2) ಪ್ರೋಟಿನ್ಗಳು
• ಪ್ರೊಟೀನ್ ಗಳು ಸಾವಯವ ಸಂಯುಕ್ತಗಳಾಗಿದ್ದು, ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್ಲಗಳು ಕಾರ್ಬನ್, ಹೈಡ್ರೊಜನ್, ಆಕ್ಸಿಜನ್ ಮತ್ತು ನೈಟ್ರೊಜನ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ.
• ಅಮೈನೋ ಆಮ್ಲಗಳ ವಿಂಗಡಣೆ
1. ಅವಶ್ಯಕ ಅಮೈನೋ ಆಮ್ಲಗಳು
• ಇವು ದೇಹದಲ್ಲಿ ಉತ್ಪಾದನೆಗೊಳ್ಳುವುದಿಲ್ಲ.
• ಆದರೆ ಇವು ದೇಹದ ಬೆಳವಣಿಗೆ ಮತ್ತು ಕಾರ್ಯ ನಿರ್ವಹಣೆಗೆ ಅಗತ್ಯವಾಗಿವೆ
• ಆದ್ದರಿಂದ ಇವುಗಳನ್ನು ನಮ್ಮ ಆಹಾರದ ಭಾಗವಾಗಿ ಸೇವಿಸಬೇಕಾಗುತ್ತದೆ.
• ಸೋಯಾಬೀನ್, ಬೇಳೆಕಾಳುಗಳು, ಮಾಂಸ, ಮತ್ತು ಹಾಲು ಇತ್ಯಾದಿಗಳಲ್ಲಿ ಅವಶ್ಯಕ ಅಮೈನೋ ಆಮ್ಲಗಳು ಇರುತ್ತವೆ.
2. ಅಗತ್ಯವಿಲ್ಲದ ಅಮೈನೋ ಆಮ್ಲಗಳು
• ಇವು ನಮ್ಮ ದೇಹದಲ್ಲಿಯೇ ಉತ್ಪತ್ತಿಯಾಗುತ್ತವೆ.
• ಉದಾಹರಣೆಗೆ: ಗ್ಲೈಸಿನ್,ಥೈರೋಸಿನ್,ಅಲನೈನ್ ಮತ್ತು ಸೆರಿನ್.
ಪ್ರೊಟೀನ್ ಗಳ ಪ್ರಾಮುಖ್ಯತೆ
1. ಕೋಶಪೊರೆ,ಉಗುರು, ಮೂಳೆಗಳು , ಸ್ನಾಯುರಜ್ಜು(tendons) ಮತ್ತು ಸ್ನಾಯುಗಳು ಇತ್ಯಾದಿಗಳಲ್ಲಿ ಇರುತ್ತವೆ.
2. ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುತ್ತವೆ.
3. ದೇಹದಲ್ಲಿನ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸುತ್ತವೆ.
4. ಇವು ವಸ್ತುಗಳ ಸಾಗಾಣಿಕೆಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಹಿಮೋಗ್ಲೋಬಿನ್ ಆಕ್ಸಿಜನ್ಅನ್ನು ಸಾಗಾಣಿಕೆ ಮಾಡುತ್ತದೆ.
5. ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ.
3) ಲಿಪಿಡ್‍ಗಳು
• ಲಿಪಿಡ್ಗಳು ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ಗಳಿಂದಾಗಿರುತ್ತವೆ. ಆದರೆ, ಇವು ಕಾರ್ಬೋಹೈಡ್ರೇಟ್ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಹೊಂದಿರುತ್ತವೆ.
• ಕೊಬ್ಬಿನ ಆಮ್ಲಗಳು ಅಣುರಚನೆಯಲ್ಲಿ ಯಾವುದೇ ದ್ವಿಬಂಧಗಳನ್ನು ಹೊಂದಿಲ್ಲದೆ ಸಂತೃಪ್ತ (saturated)ವಾಗಿರಬಹುದು ಅಥವಾ ಒಂದು ಅಥವಾ ಹೆಚ್ಚು ದ್ವಿಬಂಧಗಳನ್ನು ಹೊಂದಿದ್ದು ಅಸಂತೃಪ್ತ(unsaturated)ವಾಗಿರಬಹುದು.
• ಕೊಬ್ಬು ಮತ್ತು ಎಣ್ಣೆಗಳು, ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸರಾಲ್ಗಳಿಂದ ರಚಿತಗೊಂಡು ಸರಳ ಲಿಪಿಡ್ಗಳಾಗಿವೆ. ಲಿಪಿಡ್ಗಳು, ಗ್ಲೂಕೋಸ್ ಮತ್ತು ಪ್ರೊಟೀನ್ ನಂತಹ ಬೇರೆ ವರ್ಗಗಳೊಂದಿಗೆ ಸಂಯೋಜನೆಗೊಂಡಾಗ ಸಂಯುಕ್ತ ಲಿಪಿಡ್ಗಳು ಉಂಟಾಗುತ್ತವೆ.
ಲಿಪಿಡ್‍ಗಳ ಪ್ರಾಮುಖ್ಯತೆ
1. ದೇಹಕ್ಕೆ ಶಕ್ತಿಯನ್ನು ನೀಡುತ್ತವೆ.
2. ದೇಹದ ತಾಪವನ್ನು ಸಮಸ್ಥಿತಿಯಲ್ಲಿಡುತ್ತವೆ.
3. ಕೋಶ ಪೊರೆಯ ಭಾಗವಾಗಿರುತ್ತವೆ.
4) ನಾರಿನಂಶ
• ಆಹಾರದಲ್ಲಿ ನಾರಿನಂಶವು ಇರುವುದು ಬಹಳ ಮುಖ್ಯ. ಯಾಕೆಂದರೆ ಆಹಾರವು ಪಚನವಾದಾಗ ಆಹಾರದಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ತಡೆಯುತ್ತದೆ.
• ಸಿರಿಧಾನ್ಯಗಳಾದ ರಾಗಿ, ಸಜ್ಜೆ, ನವಣೆ,ಬಾಳೆಹಣ್ಣು ಮತ್ತು ಹಸಿರು ತರಕಾರಿಗಳಲ್ಲಿ ನಾರಿನಂಶವು ಹೆಚ್ಚಿದ್ದು, ಪಚನ ಕ್ರಿಯೆಗೆ ಸಹಕರಿಯಾಗಿ ಮಲಬದ್ಧತೆಯನ್ನು ನಿವಾರಿಸುತ್ತವೆ.
5) ಖನಿಜಾಂಶಗಳು
1. ಕ್ಯಾಲ್ಸಿಯಂ.
• ಮೂಳೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಸ್ನಾಯುಗಳ ಕಾರ್ಯನಿರ್ವಹಣೆಗೆ ಹೃದಯ ಹಾಗೂ ನರಗಳಿಗೆ, ರಕ್ತ ಹೆಪ್ಪುಗಟ್ಟುವ ಕ್ರಿಯೆಗೆ ಹಾಗೂ ನೋವುಗಳನ್ನು ಕಡಿಮೆ ಮಾಡಲು ಇದು ಅವಶ್ಯಕ.
2. ಸೋಡಿಯಂ
• ರಕ್ತದ ಒತ್ತಡದ ನಿಯಂತ್ರಣ, ಮಾಂಸಖಂಡಗಳು ಮತ್ತು ನರಗಳ ಕಾರ್ಯವನ್ನು ಹತೋಟಿಯಲ್ಲಿಡುತ್ತದೆ
3. ಅಯೋಡಿನ್
• ಥೈರಾಯ್ಡ್ ಗ್ರಂಥಿಯು ಥೈರಾಕ್ಸಿನ್ ಸ್ರವಿಸಲು ಸಹಾಯಕವಾಗಿದೆ. ಇದು ಗಾಯಿಟರ್ ರೋಗವನ್ನು ತಡೆಗಟ್ಟುತ್ತದೆ.
4. ಪೊಟ್ಯಾಸಿಯಂ
• ಎಂಬ ಖನಿಜಾಂಶವು ದೇಹದ ದ್ರವವನ್ನು ಸಮತೋಲನದಲ್ಲಿ ಇಡುತ್ತದೆ. ನರಗಳ ಹಾಗೂ ಸ್ನಾಯುಗಳ ಕಾರ್ಯಚಟುವಟಿಕೆಗಳಿಗೆ ಇದು ಅತ್ಯವಶ್ಯಕ.
ವಿಟಮಿನ್‍ಗಳು ಪ್ರಮುಖ ವಿಟಮಿನ್ ಗಳು
ವಿಟಮಿನ್‍ಗಳು
ಪ್ರಮುಖ ವಿಟಮಿನ್ ಗಳು
1. ವಿಟಮಿನ್ ಎ
• ಮೂಳೆಗಳ ಬೆಳವಣಿಗೆ, ಹಲ್ಲಿನ ರಚನೆ, ಆರೋಗ್ಯಕರ ಚರ್ಮ ಮತ್ತು ರಾತ್ರಿಯ ದೃಷ್ಟಿಯನ್ನು ಉತ್ತೇಜಿಸುತ್ತದೆ.
• ಮೀನಿನ ಯಕೃತ್ತಿನ ಎಣ್ಣೆ, ಯಕೃತ್ತು, ಹಾಲು, ಕ್ಯಾರೆಟ್, ಪಪಾಯ, ಹಸಿರು ತರಕಾರಿಗಳು ಮತ್ತು ಹಳದಿ ತರಕಾರಿಗಳು, ಡೈರಿ ಉತ್ಪನ್ನಗಳು
2. ವಿಟಮಿನ್ ಬಿ1
• ಜೀರ್ಣಕ್ರಿಯೆಗೆ ಸಹಾಯPವಾಗುತ್ತದೆÀ, ಹೃದಯ ಸ್ನಾಯುಗಳಿಗೆ ಬಲ ನೀಡುತ್ತದೆ.
• ಗೋಧಿ, ಕಡಲೇಕಾಯಿÀ, ಸೀಗಡಿ(ಠಿಡಿಚಿತಿಟಿ), ಸೋಯಾ ಅವರೆ ಮೊಳಕೆ, ಇತ್ಯಾದಿ.
3. ವಿಟಮಿನ್ ಬಿ2
• ಜೀವಕೋಶಗಳಿಗೆ ಶಕ್ತಿಯ ಬಿಡುಗಡೆಗೆ ಸಹಾಯಕ.
• ಡೈರಿ ಉತ್ಪನ್ನಗಳು, ಸೊಪ್ಪುಗಳು, ಮೀನು, ಮೊಟ್ಟೆ ಇತ್ಯಾದಿ.
4. ವಿಟಮಿನ್ ಬಿ3
• ಜೀರ್ಣಾಂಗ ವ್ಯವಸ್ಥೆ ಹಾಗೂ ನರಮಂಡಲ ವ್ಯವ¸ಗೆ ಸಹಕಾರಿ. ಕೊಲೆಸ್ಟ್ರಾಲ್ ಮಟ್ಟವನ್ನು ಕುಗ್ಗಿಸುತ್ತದೆ.
• ನಾಯಿಕೊಡೆ, ಸೀಗಡಿ, ಕೋಳಿ, ಪಶುಮಾಂಸ, ಕಡಲೇಕಾಯಿ, ಕಾಳುಗಳು ಇತ್ಯಾದಿ.
5. ವಿಟಮಿನ್ ಬಿ6
• ಅಮೈನೋ ಆಮ್ಲದ ಚಯಾಪಚಯ ಕ್ರಿಯೆಯಲ್ಲಿ ಭಾಗವಹಿಸುತ್ತದೆ.
• ಧಾನ್ಯಗಳು, ಹಾಲು, ಗೋಧಿ ಮೊಳಕೆ, ಮಾಂಸ, ಬಾಳೆಹಣ್ಣು, ಮೊಟ್ಟೆ ಇತ್ಯಾದಿ.
6. ವಿಟಮಿನ್ ಬಿ12
• ಕೆಂಪು ರಕ್ತ ಕಣಗಳ ಉತ್ಪತ್ತಿ ಮತ್ತು ನ್ಯೂಕ್ಲಿಕ್ ಆಮ್ಲಗಳ ಉತ್ಪತ್ತಿಗೆ ಅತ್ಯಗತ್ಯ. ರಕ್ತಹೀನತೆಯನ್ನು ತಡೆಯುತ್ತದೆ.
• ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ಇತ್ಯಾದಿ.
7. ವಿಟಮಿನ್ ಸಿ
• ರಕ್ತಸ್ರಾವ ತಡೆಯಲು ರಕ್ತನಾಳಗಳನ್ನು ಬಲಿಷ್ಟವಾಗಿಡಲು, ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು, ದೇಹದ ಜೀವಕೋಶಗಳನ್ನು ಬಂಧಿಸಲು, ಶೀತ, ಆಯಾಸ ತಡೆಯಲು
• ಲಿಂಬೆಜಾತಿಯ ಹಣ್ಣುಗಳು, ಹಸಿರು ಸೊಪ್ಪು ಮತ್ತು ತರಕಾರಿಗಳು, ಟೊಮ್ಯಾಟೋ, ಇತ್ಯಾದಿ.
8. ವಿಟಮಿನ್ ಡಿ
• ಮೂಳೆಗಳ ಹಾಗೂ ಹಲ್ಲುಗಳ ಬೆಳವಣಿಗೆಗೆ ಮತ್ತು ದೇಹದ ಬೆಳವಣಿಗೆಗೆ, ಹೃದಯದ ಕಾರ್ಯನಿರ್ವಹಣೆ, ರಿಕೆಟ್ಸ್ ಕಾಯಿಲೆಯನ್ನು ತಡೆಯಲು ಅತ್ಯವಶಕ.
• ಹಾಲು, ಸೂರ್ಯನಿಗೆ ಮೈ ಒಡ್ಡುವುದು ಇತ್ಯಾದಿ.
9. ವಿಟಮಿನ್ ಇ
• ಜೀವಕೋಶದ ಆರೋಗ್ಯಕ್ಕೆ, ಪ್ರೊಟೀನ್ ಹಾಗೂ ಕ್ಯಾಲ್ಸಿಯಮ್ ಚಯಾಪಚಯ ಕ್ರಿಯೆಯ ನಿಯಂತ್ರಣಕ್ಕೆ ಅವಶ್ಯಕ.
• ಸೋಯಾ ಅವರೆ, ಮೊಳಕೆ ಕಾಳುಗಳು, ಹಸಿರು ಸೊಪ್ಪು, ಧಾನ್ಯಗಳು, ಮೊಟ್ಟೆಗಳು ಇತ್ಯಾದಿಗಳಲ್ಲಿ ಇರುತ್ತದೆ.
<script async src="//pagead2.googlesyndication.com/pagead/js/adsbygoogle.js"></script>
<script>
(adsbygoogle = window.adsbygoogle || []).push({
google_ad_client: "ca-pub-2131427575533598",
enable_page_level_ads: true
});
</script>
ನೆನಪಿಡಬೇಕಾದ ಅಂಶಗಳು
o ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ - ಬೆರಿಬೆರಿ
o ಬಿ2 ವಿಟಮಿನ್ ಕೊರತೆಯಿಂದಾಗುವ ನಷ್ಟ - ಬೆಳವಣಿಗೆ ಇಲ್ಲದಿರುವುದು, ಕಣ್ಣು ಕೆಂಪಾಗುವುದು, ದೃಷ್ಟಿಮಾಂಧ್ಯ, ನಾಲಿಗೆಯ ಮೇಲೆ ಹುಣ್ಣಾಗುವುದು, ಬಾಯಲ್ಲಿ ಹುಣ್ಣಾಗುವುದು
o ಆ್ಯಂಟಿ ಕ್ಸಿರಾಫ್ತಾಲ್ಮಿಕ್ ವಿಟಮಿನ್ ಎಂದರೆ – ‘ಎ’ ವಿಟಮಿನ್
o ‘ಎ’ ವಿಟಮಿನ್ ಅನ್ನು ಕಣ್ಣಿನ ದೃಷ್ಟಿವೃದ್ಧಿಗೊಳಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಳಸಲಾಗುತ್ತದೆ
o ‘ಎ’ ವಿಟಮಿನ್ ಕೊರತೆಯಿಂದ ಬರುವ ಸಮಸ್ಯೆ – ರಾತ್ರಿ ಕುರುಡು, ಕುರುಡು.
o ಸಯಾನೋ ಕೊಬಾಲಮಿನ್ ಎಂದು ಬಿ12 ವಿಟಮಿನ್ ಕರೆಯುತ್ತಾರೆ .
o ‘ಬಿ’ ಕಾಂಪ್ಲೆಕ್ಸ್ ವಿಟಮಿನ್ಗಳು - ಬಿ1, ಬಿ2, ಬಿ6, ಬಿ12
o ಥಯಾಮಿನ್ ಎಂದು ಬಿ1 ವಿಟಮಿನ್ ಕರೆಯುತ್ತಾರೆ
o ಆ್ಯಂಟಿ ಬೆರಿಬೆರಿ, ಅ್ಯಂಟಿ ನ್ಯೂರೆಟಿಕ್ ಎಂದು ಯಾವುದನ್ನು ಕರೆಯುತ್ತಾರೆ - ಬಿ1 ವಿಟಮಿನ್
o ಸಯಾನೋ ಕೊಬಾಲಮಿನ್ ಎಂದು ಬಿ 12 ವಿಟಮಿನ್ ಕರೆಯುತ್ತಾರೆ -
o ‘ಬಿ’ ವಿಟಮಿನ್ನ ಉಪಯೋಗಗಳು - ನರಮಂಡಲ ಹಾಗೂ ಮಾಂಸಖಂಡಗಳ ಶಕ್ತಿಗಾಗಿ, ಶ್ವಾಸಕ್ರಿಯೆಯನ್ನು ಸಲೀಸಾಗಿಸಲು
o ಕುಂಠಿತ ಬೆಳವಣಿಗೆ, ಹಸಿವಿಲ್ಲದಿರುವಿಕೆ, ಅಜೀರ್ಣಕ್ಕೆ ಕಾರಣ – ‘ಬಿ’ ವಿಟಮಿನ್ ಕೊರತೆ
o ಧಾನ್ಯ, ಕಡಲೆ, ಮೊಟ್ಟೆಗಳಲ್ಲಿ ಬಿ ವಿಟಮಿನ್ ಲಭ್ಯ.
o ರೈಬೋವಿನ್ ಇಲ್ಲದೇ ರೈಬೋಫ್ಲೋವಿನ್ ಎಂದು ಬಿ2 ವಿಟಮಿನ್ ಕರೆಯುತ್ತಾರೆ
o ‘ಪಿರಿಡಾಕ್ಸಿನ್’ ಎಂದರೆ - ಬಿ6 ವಿಟಮಿನ್
o ಬಿ6ನ ಉಪಯೋಗ – ಅಮೈನೋ ಆಮ್ಲ, ಜೀರ್ಣಶಕ್ತಿ ವೃದ್ಧಿ
o ಬಿ6 ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳು – ತುಟಿ ಅಂಚುಗಳು ಸೀಳುವಿಕೆ, ಫಿಟ್ಸ್, ರಕ್ತಹೀನತೆ
o ಬಿ6 ಯಾವುದಲ್ಲಿ ಲಭ್ಯ – ಮಾಂಸ, ತಾಜಾ ತರಕಾರಿ
o ಬಯೋಟಿನ್ ಯಾವುದರಲ್ಲಿ ಲಭ್ಯ - ಬೇಳೆ ಕಾಳುಗಳು, ಧಾನ್ಯಗಳು
o ನಿಕೋಟಿನಿಕ್ ಆಮ್ಲ ಎಂದು ನಿಯಾಸಿನ್ ಕರೆಯುತ್ತಾರೆ -
o ಆ್ಯಂಟೀಸ್ಟೆರಿಲಿಟೀ ವಿಟಮಿನ್ ಎಂದರೆ – ವಿಟಮಿನ್ ‘ಇ’
o ವಂಶಪಾರಂಪರ್ಯ ವ್ಯಾಧಿಗಳು – ಇಸ್ನೋಫೀಲಿಯಾ, ಬಕ್ಕತಲೆ, ರಾತ್ರಿಕುರುಡು, ಅಸ್ತಮಾ
o ‘ಕ್ಯಾಲ್ಸಿಫೆರಾಲ್’ ಎಂದರೆ – ವಿಟಮಿನ್ ‘ಡಿ’
o ವಿಟಮಿನ್ ‘ಇ’ ಯಾವುದರಲ್ಲಿ ಲಭ್ಯ – ಮೀನೆಣ್ಣೆ, ಹಾಲು, ಬೆಣ್ಣೆ
o ಆ್ಯಂಟಿ ರಿಕೆಟ್ಸ್ ಇಲ್ಲವೇ ಸನ್ಷೈನ್ ವಿಟಮಿನ್ ಎಂದು ವಿಟಮಿನ್ ‘ಡಿ’ ಕರೆಯುತ್ತಾರೆ .
o ವಿಟಮಿನ್ ‘ಇ’ ಕೊರತೆಯಿಂದ ಉಂಟಾಗುವ ಸಮಸ್ಯೆಗಳ್ಯಾವುವು - ಸ್ತ್ರೀಯರಲ್ಲಿ ಗರ್ಭಪಾತ, ಪುರುಷರಲ್ಲಿ ನಪುಂಸಕತ್ವ
o ‘ಸಿ’ ವಿಟಮಿನ್ ಲಭ್ಯ - ನೆಲ್ಲಿಕಾಯಿ, ಹುಳಿ ಹಣ್ಣುಗಳು, ಮೊಳಕೆಗಳು, ಟೊಮ್ಯಾಟೋ, ಸೊಪ್ಪು
o ಆಸ್ಕಾರ್ಬಿಕ್ ಆಮ್ಲ ಎಂದರೆ– ವಿಟಮಿನ್ ‘ಸಿ’
o ವಿಟಮಿನ್ ಕೆ ಯಾವುದರಲ್ಲಿ ಲಭ್ಯ - ಹಸಿರು ತರಕಾರಿ, ಟೊಮ್ಯಾಟೋ
o ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ – ಓ
o ‘ಸಿ’ ವಿಟಮಿನ್ ದೋಷದಿಂದಾಗುವ ತೊಂದರೆಗಳು - ಸ್ಕರ್ವಿ ವ್ಯಾಧಿ, ವ್ರಣಗಳು ವಾಸಿಯಾಗದಿರುವುದು, ಒಸಡುಗಳಲ್ಲಿ ರಕ್ತಸ್ರಾವ
o ವಿಟಮಿನ್ ‘ಡಿ’ ಉಪಯೋಗಗಳೇನು – ಕ್ಯಾಲ್ಸಿಯಂ ಒದಗಿಸುತ್ತದೆ ಹಾಗೂ ಹಲ್ಲು ಹಗೂ ಮೂಳೆಗಳ ಗಟ್ಟಿತನ
o ‘ಡಿ’ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ – ರಿಕೆಟ್ಸ್
o ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ – ವಿಟಮಿನ್ ಕೆ
o ‘ಕೊಯಾಗ್ಯುಲೇಷನ್’ ವಿಟಮಿನ್ ಎಂದು ಯಾವುದನ್ನು ಕರೆಯುತ್ತಾರೆ – ವಿಟಮಿನ್ ಕೆ
ಪೋಷಣೆ
ಪೋಷಣೆ

• ಜೀವಿಗಳು ಆಹಾರ ಸೇವಿಸಿ, ಜೀರ್ಣಿಸಿ ದೇಹಗತ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪೋಷಣೆ ಎಂದು ಕರೆಯಲಾಗುತ್ತದೆ.
• ಸ್ವಪೋಷಣೆ: ಯಾವ ಜೀವಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೋ ಅಂತಹ ಜೀವಿಗಳನ್ನು ಸ್ವಪೋಷಕಗಳು(autotrophs) ಎಂದು ಕರೆಯಲಾಗುತ್ತದೆ. ಎಲ್ಲಾ ಹಸಿರು ಸಸ್ಯಗಳು ಸ್ವಪೋಷಕಗಳು..
• ಪರಪೋಷಣೆ : ಪ್ರಾಣಿಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳೂ ತಮ್ಮ ಆಹಾರ ತಾವೇ ತಯಾರಿಸುವುದಿಲ್ಲವೋ ಅಂತಹ ಜೀವಿಗಳನ್ನು ಪರಪೋಷಕಗಳು ಎನ್ನುಲಾಗುತ್ತದೆ.
• ಪ್ರಾಣಿಗಳಲ್ಲಿ ಪೋಷಣೆ
• ಪ್ರಾಣಿ ಪೋಷಣೆಯಲ್ಲಿ ಐದು ಹಂತಗಳಿವೆ.
• ಸೇವನೆ ->ಪಚನಕ್ರಿಯೆ -> ಹೀರಿಕೆ -> ಸ್ವಾಂಗೀಕರಣ ->ವಿಸರ್ಜನೆ
<script async src="//pagead2.googlesyndication.com/pagead/js/adsbygoogle.js"></script>
<script>
(adsbygoogle = window.adsbygoogle || []).push({
google_ad_client: "ca-pub-2131427575533598",
enable_page_level_ads: true
});
</script>
ಮಾನವನಲ್ಲಿ ಪೋಷಣೆ

o ಜೀರ್ಣನಾಳ
o ಜೀರ್ಣನಾಳವು ಬಾಯಿ, ಗಂಟಲು, ಅನ್ನನಾಳ, ಉದರ, ಸಣ್ಣಕರುಳು, ದೊಡ್ಡಕರುಳು ಮತ್ತು ಗುದದ್ವಾರವನ್ನು ಒಳಗೊಂಡಿದೆ.
o ಲಾಲಾರಸವು ಆಹಾರವನ್ನು ಮೆದುವಾಗಿಸುತ್ತದೆ.
o ಎಪಿಗಾಟ್ಲಿಸ್ ಎಂಬ ಅಂಗಾಂ±ವುÀ ಆಹಾರ ಶ್ವಾಸನಾಳವನ್ನು ಪ್ರವೇಶಿಸುವುದನ್ನು ತಡೆಯುತ್ತದೆ.
o ಜಠರ ರಸವು ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊಂದಿರುತ್ತದೆ.
o ಜಠರದಲ್ಲಿ ಪಚನಕ್ಕೆ ಸಹಾಯಕವಾಗಿರುವ ಪೆಪ್ಸಿನ್ ಹಾಗೂ ರೆನಿನ್ ಎಂಬ ಕಿಣ್ವಗಳೂ ಸ್ರವಿಕೆಯಾಗುತ್ತವೆ.
ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು : (Vitamin Names &their Chemical Names)
ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು : (Vitamin Names &their Chemical Names)
●ಜೀವಸತ್ವ ಎ ---- ರೆಟಿನಾಲ್
●ಜೀವಸತ್ವ ಬಿ1 ---- ಥಿಯಾಮೈನ್
●ಜೀವಸತ್ವ ಬಿ2 ---- ರಿಬೋಫ್ಲಾವಿನ್
●ಜೀವಸತ್ವ ಬಿ3 ---- ನಿಯಾಸಿನ್
●ಜೀವಸತ್ವ ಬಿ5 ---- ಪಾಂಟೊಥೆನಿಕ್ ಆಮ್ಲ
●ಜೀವಸತ್ವ ಬಿ6 ---- ಪೆರಿಡೊಕ್ಸೀನ್
●ಜೀವಸತ್ವ ಬಿ7 ---- ಬಯೋಟಿನ್
●ಜೀವಸತ್ವ ಬಿ9 ---- ಫೋಲಿಕ್ ಆಮ್ಲ
●ಜೀವಸತ್ವ ಬಿ12 ---- ಸೈಯಾನೊಕೊಬಾಲಮಿನ್
●ಜೀವಸತ್ವ ಸಿ ---- ಆಸ್ಕೋರ್ಬಿಕ್ ಆಮ್ಲ
●ಜೀವಸತ್ವ ಡಿ ---- ಕ್ಯಾಲ್ಷಿಫೆರಾಲ್
●ಜೀವಸತ್ವ ಇ ---- ಟೊಕೊಫೆರಾಲ್
●ಜೀವಸತ್ವ ಕೆ ---- ಫೈಲ್ಲೋಕ್ವಿನೊನ್ ಮತ್ತು ಮೆನಾಕ್ವಿನ್ನೋನ್ಸ್"
Contributed by: Spardhaloka
Subscribe to:
Posts (Atom)